೧೮೨೪-೮೯. ಐರಿಷ್ ಕವಿ.  ಫ್ರೇಸರ್ಸ್ ಮ್ಯಾಗಜಿನಿನ ಸಂಪಾದಕನಾಗಿದ್ದ. (೧೮೭೪-೭೯) ಪೊಯಮ್ಸ್ (೧೮೩೦), ಡೇ ಅಂಡ್ ನೈಟ್ ಸಾಂಗ್ಸ್ (೧೮೫೪), ಲಾರೆನ್ಸ್ ಬ್ಲೂಮ್ಫೀಲ್ಡ್ ಇನ್ ಐರ್ಲೆಂಡ್ (೧೮೬೪), ಐರಿಷ್ ಸಾಂಗ್ಸ್ ಅಂಡ್ ಪೊಯೆಮ್ಸ್ (೧೮೮೭)-  ಇವು ಈತನ ಮುಖ್ಯ ಕೃತಿಗಳು. ಸ್ವತಃ ಕಲಾವಿದೆಯಾದ ಈತನ ಪತ್ನಿ ಇವನ ಮರಣಾನಂತರ ಇವನ ಪತ್ರಗಳನ್ನು ಪ್ರಕಟಿಸಿದಳು. ಯೇಟ್ಸ್ ನ ಆರಂಭದ ಕವನಗಳಲ್ಲಿ ಈತನ ಪ್ರಭಾವ ಕಾಣುತ್ತದೆ.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ